ಕರ್ನಾಟಕ ರಾಜ್ಯದ ವಿಧಾನಸಭ ಚುನಾವಣೆ 2018ರ ಮುನ್ನೋಟ
ಮೂರು ಪಕ್ಷಗಳ ಚುನಾವಣೆ ಪೂರ್ವ
ತಯಾರಿ ಆಗಲೆ ಪ್ರಾರಂಬವಾಗಿದೆ. 2018ರ
ಚುನಾವಣಾ ಕಣ ರಣರಂಗ
ವಾಗುವ ಲಕ್ಷಣಗಳು ಗೋಚರಿಸುತ್ತಿವೆ.ಕಾಂಗ್ರೆಸ್ ಪಕ್ಷ ರಾಜ್ಯಸರ್ಕಾರದ
ಸಾದನೆಗಳ ಮೇಲೆ ಚುನಾವಣೆ ಎದುರಿಸಲು
ಸಜ್ಜಾಗುತಿದ್ದಾರೆ. ಭಾರತೀಯ ಜನತಾ ಪಕ್ಷ
ಮೋದಿ ಅಲೆ ಮತ್ತು ಕೇಂದ್ರ
ಸರ್ಕಾರದ ಕಾರ್ಯಕ್ರಮಗಳು ಮತಗಳಾಗಿ ಪರಿವರ್ತಿಸಲು
ರಣ ತಂತ್ರ ಹಣೆಯುತಿದ್ದೆ.ಇನ್ನೂ ಜೆಡಿಸ್ ಗೆ
2018 ರ ಚುನಾವಣೆ ಪ್ರಮುಖ ಚುನಾವಣೆ, ಎರಡು ರಾಜಕೀಯ ಪಕ್ಷಗಳಿಗೆ ಪ್ರಬಲ ಸ್ಪರ್ದೆ ಹೊಡ್ದಲು ತಯಾರಿ
ನಡೆಸಿದೆ, 2018ರ ಚುನಾವಣೆ ಶತಾಯ ಗತಾಯ ಅಧಿಕಾರ ಹಿಡಿಯಲು ಸದ್ದಿಲ್ಲದೆ ತನ್ನ ಪಟ್ಟುಗಳನ್ನು ಹೆಣೆಯುತಿದೆ.
ಅನೇಕ ಮಾಜಿ ಸಚಿವರು,
ಮಾಜಿ ಶಾಸಕರು ಮುಂದಿನ ತಮ್ಮ ಮುಂದಿನ ರಾಜಕೀಯ ಭವಿಷ್ಯ ಸೇಫ್ ಆಗಲು ಪ್ಪಾಕ್ಷಾಂತರ ಮಾಡುತಿದ್ದಾರೆ.
ಮತದಾರ ಪ್ರಭುಗಳು ತನ್ನದೆಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ಬಿಜೆಪಿ ತನ್ನ ಮುಖ್ಯಮಂತ್ರಿ
ಅಬ್ಯರ್ಥಿಯನ್ನಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರನ್ನು ಪಕ್ಷದ ಅದ್ಯಕ್ಷರು ಸಾರ್ವಜನಿಕ
ಸಭೆಯೊಂದರಲ್ಲಿ ಘೋಷಣೆ ಮಾಡಿದ್ದಾರೆ. ಬಿಎಸ್ವೈ ಅವರು ಟೀಮ್ ವರ್ಕ್ ಶುರು ಮಾಡಿ ರಾಜ್ಯದಂತ ಬಿರುಸಿನಿಂದ
ಒಂದರ ಹಿಂದೆ ಒಂದು ಸಭೆಗಳನ್ನ ಮಾಡುತಿದ್ದಾರೆ ಮತ್ತು ಯಾವ ಕ್ಷೇತ್ರದಲ್ಲಿ ತಮ್ಮ ಪಕ್ಷಕ್ಕೆ ಹಿನ್ನಡೆ
ಆಗಬಹುದು ಎಂದು ತಿಳಿದು ಅಂತಹ ಕ್ಷೇತ್ರಗಳನ್ನು ಪಟ್ಟಿ ಮಾಡಿ ಗೆಲ್ಲುವ ಕುದುರೆಗಳನ್ನು ತಯಾರು ಮಾಡುವತ್ತ
ಪ್ಲಾನ್ ಮಾಡುತಿದ್ದಾರೆ.
ಕಾಂಗ್ರೆಸ್ ಪಕ್ಷದ
ಪ್ರಾಬಾವಿ ಮುಖಂಡರನ್ನ ತಮ್ಮ ಪಕ್ಷಕ್ಕೆ ಕರೆ ತಂದಿದ್ದಾರೆ. S M Krishna ಅವರು ಪಕ್ಷ ತೊರೆದ ತಕ್ಷಣ
ಕಾರ್ಯಪ್ರವೃತರಾಗಿ ತಕ್ಷಣ ಆರ್ ಅಶೋಕ್ ಅವರನ್ನು ಸಂಪರ್ಕಿಸಿ ಕೊನೆಗೂ ಸೇರ್ಪಡೆ
ಮಾಡಿಸಲು ಯಶಸ್ವಿ ಆಗಿದ್ದಾರೆ.
ಕೃಷ್ಣರವರನ್ನು ಯಾಕೆ
ಮುತುವರ್ಜಿ ವಹಿಸಿ ಪಕ್ಷಕ್ಕೆ ಕರೆತಂದರು ಎಂದು ಎಲ್ಲರೂ ಯೋಚಿಸುತಿರಬಹುದು, ಕಾರಣ ಬೆಂಗಳೂರಿನ 28
ಕ್ಷೇತ್ರಗಳು ಹಾಗು ಬಿಜೆಪಿಗೆ ಹಳೆಮೈಸೂರುಬಾಗದಲ್ಲಿ ಗಟ್ಟಿಯಾಗಿ ನೆಲೆಯೂರಬಹುದು ಎಂದು ಮುಂದಾಲೋಚನೆ
ಮಾಡಿದ ಹಾಗೆ ಮೇಲ್ನೋಟಕ್ಕೆ ಕಂಡು ಬರುತಿದೆ.ಕೃಷ್ಣ ಅವರು ಪಕ್ಷಕ್ಕೆ ಬಂದರೆ ಮಂಡ್ಯ ಮತ್ತು ಹಳೇ ಮೈಸೂರು
ಬಾಗದಲ್ಲಿ ಪಕ್ಷಕ್ಕೆ ಆನೆ ಬಲ ಬರುವದು ಎಂದು ತಿಳಿದು ಮುತುವರ್ಜಿವಹಿಸಿ ಕೊನೆಗು ಯಶಸ್ವಿ ಆಗಿದ್ದಾರೆ.
ಜೆಡಿಸ್ ಮತ್ತು ಕಾಂಗ್ರೆಸೇಗೆ ಈ ಬಾಗದಲ್ಲಿ
ಟಾಂಗ್ ಕೊಡಲು ಬಿಜೆಪಿ ಸಜ್ಜಾಗುತಿದೆ.ಕೃಷ್ಣ ಅವರ ಬಗ್ಗೆ
ಬೆಂಗಳೂರಿನ ಜನರಿಗೆ ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಲಿ ಕೃಷ್ಣರ ಬಗ್ಗೆ ಸಾಫ್ಟ್
ಕಾರ್ನರ್ ಇದೆ ಹಾಗೂ ಬೆಂಗಳೂರಿನ ಬೆಳವಣಿಗೆಗೆ ಹಾಗೂ
IT ಕ್ಷೇತ್ರ ಬಲವಾಗಿ ಬೇರೂರಲು ಕೃಷ್ಣ ಅವರ ಕೊಡುಗೆ ಅಪಾರ ಎಂದು ಬೆಂಗಳೂರಿನ ಜನರಲ್ಲಿ ಜನಜನಿತವಾಗಿದೆ
ಮತ್ತು ಕ್ಲೀನ್ ಇಮೇಜ್ ಅವರಿಗೆ ಇರುವುದರಿಂದ ಬೆಂಗಳೂರಿನ್ನಲಿರುವ 28 ವಿದಾನಸಭೆ ಕ್ಷೇತ್ರಗಳಲ್ಲಿ
ಬಿಜೆಪಿ ತನ್ನ ವರ್ಚಸ್ಸನ್ನು ಇಮ್ಮಡಿಗೊಳಿಸಿಕೊಳ್ಳಲು ಕೃಷ್ಣ ಅವರ ಸೇರ್ಪಡೆ ಸಕಾರಾತ್ಮಕ ಪರಿಣಾಮ ಬೀರಬಹುದು
ಎಂದು ಲೆಕ್ಕಾಚಾರದಲ್ಲಿ ತಲ್ಲಿನವಾಗಿದೆ.ಬೆಂಗಳೂರಿನ 28 ಕ್ಷೇತ್ರಗಳಲ್ಲಿ 20 ಕ್ಷೇತ್ರವನ್ನಾದರು ಗೆಲ್ಲಬೇಕು
ಎಂದು ಪಣತೊಟ್ಟಂತಿದೆ. ಮೇಲ್ನೋಟಕ್ಕೆ
ಬಿಜೆಪಿ ಆತ್ಮವಿಶ್ವಾಸದ ಹೆಜ್ಜೆಗಳ್ಳನು ಇಡುತ್ತಾ ಮುನ್ನುಗುತಿದೆ.ಬಿಜೆಪಿಯ ಬೆಳವಣಿಗೆಗಳನ್ನು
ನೋಡುತಿದ್ದರೆ ಕರ್ನಾಟಕದ ಚುನಾವಣೆಯನ್ನು ಗಂಭೀರತಯಿಂದ ತೆಗೆದುಕೊಂಡು ಕೊನೆ ಕ್ಷಣದ ತರಾತುರಿಯಲಿ ಆಗಬಹುದಾದ ಎಡವಟ್ಟುಗಳಿಗೆ
ಅವಕಾಶ ನೀಡಬಾರದು ಎಂದು ನಿರ್ದರಿಸಿ ದಿಟ್ಟ ಹೆಜ್ಜೆ ಇಟ್ಟಿದೆ ಎನ್ನಬಹುದು.
ಜೆಡಿಸ್ ಎರಡು ಪಕ್ಷಗಳಿಗೆ
ತನ್ನ ಗುಟ್ಟುಗಳನ್ನು ಬಿಟ್ಟು ಕೊಡದೆ ತನ್ನದೆ ಲೆಕ್ಕಾಚಾರದಲ್ಲಿ ಮುಳುಗಿದೆ ಸದ್ದಿಲ್ಲದೆ ತನ್ನ ಅಬ್ಯರ್ಥಿಗಳನ್ನು
ಚುನಾವಣೆಗೆ ತಯಾರು ಮಾಡುವತ್ತ ಚಿತ್ತ ನೆಟ್ಟಿದೆ. ಬೆಂಗಳೂರು
ನಗರ, ಕೋಲಾರ ಹಾಗೂ ಉತ್ತರ ಕರ್ನಾಟಕ ಬಾಗದಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಹೋರಾಟ ಮಾಡಬೇಕು
ಮತ್ತು ಜನರನ್ನ ತಲಪುವ ಕೆಲಸಗಳಾಗಬೇಕು ಆಗ ಪ್ರಬಲ ಪೈಪೋಟಿ ಕೊಡಲು ಸಾದ್ಯ ಮತ್ತು 150 ಕ್ಷೇತ್ರಗಳಲ್ಲಿ
ಪ್ರಬಲ ಅಬ್ಯರ್ಥಿಗಳನ್ನು ಚುನಾವಣಾ ಕಣದಲ್ಲಿ ಉಳಿಸಿಕೊಳ್ಳಬೇಕು. ಚುನಾವಣಾ ಪೂರ್ವತಯಾರಿ ಕೆಲಸಗಳು
ಶರವೇಗದಲ್ಲಿ ಜೆಡಿಸ್ ಪಕ್ಷದಲ್ಲಿ ಆಗಬೇಕು ಆಗ ಪ್ರಬಲ ಪೈಪೋಟಿ ಕೊಡಲು ಸಾದ್ಯವಗುತದೆ ಮತ್ತು ಜನರ ಆಶೀರ್ವಾದವಿದ್ದರೆ
ಜೆಡೀಸ್‌ಗೆ ಉತ್ತಮ್ಮ ಪಲಿತಾಂಶ 2018 ರ ಚುನಾವಣೆಯಲ್ಲಿ ನಿರೀಕ್ಷಿಸಬಹುದು.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ
ಆಡಳಿತದ ಚುಕ್ಕಾಣೆ ಹಿಡಿದಿದೆ. ಬಿಜೆಪಿ ಮತ್ತು ಜೆಡಿಸ್ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷಕ್ಕೆ ಒತ್ತಡ
ಹೆಚ್ಚು ಒಂದು ಕಡೆ ಉಳಿದಿರುವ ಅವದಿಯಲ್ಲಿ ಇನ್ನು ಹೆಚ್ಚು ಜನಪ್ರಿಯ ಕೆಲಸಗಳಾಗಬೇಕು ಮತ್ತೊಂದು ಕಡೆಚುನಾವಣೆಗೆ ತಯಾರಾಗಬೇಕು. ಪಕ್ಷಾಂತರ ಮಾಡುತಿರುವವರಲ್ಲಿ
ಹೆಚ್ಚು ಕಾಂಗ್ರೆಸ್ ಪಕ್ಷದಿಂದಲ್ಲೇ ಈ ಬೆಳವಣಿಗೆಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಮುಂದಾದರು
ಪಕ್ಷಬಿಡಬೇಕೆಂದಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆಂದುಕೊಂಡು ಆತ್ಮವಿಶ್ವಸಾ ತುಂಬುವ ಕೆಲಸಗಳಾಗಬೇಕು.
ಕರ್ನಾಟಕದಜನ ಶಾಂತಿಪ್ರಿಯರು
ಮತ್ತು ಸಹೃದಯವಂತರು.ಜನತಂತ್ರ ವ್ಯವಸ್ತೆಯಲ್ಲಿ ಒಳ್ಳೆ ಕೆಲಸಗಳನ್ನು ಮಾಡುವವರನ್ನ ಸದಾಕಾಲ ಹಾರೈಸುತ್ತಾ
ವಿಜಯಶಾಲಿಯನ್ನಾಗಿಸುತ್ತಾರೆ. ಕರ್ನಾಟಕದ
ಜನತೆ 2018ರಲ್ಲಿ, ಕರುನಾಡನ್ನು ಕಾಯುವ, ಕಾಪಾಡುವ ಕರ್ನಾಟಕದ ಕನಸುಗಳನ್ನು ನನಸು ಮಾಡುವ ನಾಯಕನ ನಿರೀಕ್ಷೆಯಲ್ಲಿದೆ
ಎಂದರೆ ತಪ್ಪಾಗಲಾರದು.
Good one and articulated rightly. Expecting good leadership in Karnataka state in 2018 elections.
ReplyDeleteI was not knowing when will be the mla elections thanks for reminding. keep writing